top of page
old-parchment-paper-texture-background-vintage_118047-6894_edited.jpg
websitepng.png

Kusumaale

ಡ್ರಾಮಾ ಲೈಬ್ರರಿ (thedramalibrary.com) ದೇಶದಾದ್ಯಾಂತ ಪ್ರಕಟವಾಗಿರುವ ನಾಟಕಗಳ ಜೀವಂತ ಆರ್ಕೈವ್ ಆಗಿರುವುದರ ಜೊತೆಗೆ, ಇನ್ನೊಂದು ಮುಖ್ಯವಾದ ಉದ್ದೇಶವನ್ನು ಹೊಂದಿದೆ – ಈಗಿರುವ ನಾಟಕಗಳ ಸಂಪತ್ತಿಗೆ ಹೊಸದನ್ನು ಸೇರ್ಪಡೆಗೊಳಿಸುವುದು, ರಂಗಭೂಮಿಯಲ್ಲಿ ಹೊಸ ಬರಹಗಾರರು ಮತ್ತು ಹೊಸ ಬರವಣಿಗೆಗಳ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸುವುದು ಮತ್ತು ಸಾಮರ್ಥ್ಯವನ್ನು ರೂಪಿಸುವುದು.

 

2023ರಲ್ಲಿ, ನಾವು Brecht@2023 ಎಂಬ ಕಾರ್ಯಕ್ರಮದ ಅಡಿಯಲ್ಲಿ ಎರಡು ಹೊಸ ನಾಟಕಗಳನ್ನು ಆಜ್ಞಾಪಿಸಲು ಭಾಗ್ಯವಂತರಾಗಿದ್ದೇವೆ. ಈ ಎರಡು ನಾಟಕಗಳು – ‘Saheb No Coat’ (ಗುಜರಾತಿ) ಅಭವಿಮನ್ಯು ಆಚಾರ್ಯ ಅವರಿಂದ ಮತ್ತು 'Uncocked' (ಇಂಗ್ಲಿಷ್) ವಿ. ಬಾಲಕೃಷ್ಣನ್ ಅವರಿಂದ – ಬ್ರೆಕ್ಟ್ ಅವರ ಎರಡು ಕೃತಿಗಳಿಗೆ ಪ್ರತಿಕ್ರಿಯೆಯಾಗಿ ಬರೆಯಲ್ಪಟ್ಟಿದ್ದು, ಈಗ ಡ್ರಾಮಾ ಲೈಬ್ರರಿಯ ಸಂಪತ್ತಿಗೆ ಹೆಮ್ಮೆಯ ಸೇರ್ಪಡೆಗಳಾಗಿವೆ.

 

ಕಳೆದ ವರ್ಷ, ನಾವು ‘Third Bell’ ಎಂಬ ಯೋಜನೆಯ ಮೊದಲ ವರ್ಷದ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇದು, ಮೂರು ವರ್ಷಗಳ ಕಾಲ ಪ್ರತಿ ವರ್ಷ ಎರಡು ಹೊಸ ನಾಟಕಗಳನ್ನು ಬಂಗಾಲಿ ಭಾಷೆಯಲ್ಲಿ ಆಜ್ಞಾಪಿಸಲು ಉದ್ದೇಶಿತವಾಗಿದೆ.

 

Third Bell ನ ಮೊದಲ ಆವೃತ್ತಿ ಈಗ ಪೂರ್ಣಗೊಂಡಿದೆ; ಟಿಟಾಸ್ ಅವರ 'Mon Paboner Nao' ಮತ್ತು ರಿತೋ ದೀಪ್ ಅವರ 'Janakrajar Pala' ಎಂಬ ಎರಡು ನಾಟಕಗಳು ಈಗ TDL ನಲ್ಲಿ ಲಭ್ಯವಿವೆ. ಈ ನಾಟಕಗಳನ್ನು ರಂಗಸ್ಥಳದಲ್ಲಿ ಪ್ರದರ್ಶಿಸಲು ಮತ್ತು ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸಲು ಪ್ರಯತ್ನಗಳು ನಡೆಯುತ್ತಿವೆ.

 

ಈ ವರ್ಷ, ನಾವು ಸಡಗರದಿಂದ ಘೋಷೋಸುತ್ತಿರುವ ಕಾರ್ಯಕ್ರಮ –

 

ಕುಸುಮಾಲೆ

ಗಿರೀಶ್ ಕಾರ್ನಾಡ್ ಕನ್ನಡ ನಾಟಕ ಬರವಣಿಗೆಯ ಫೆಲೋಶಿಪ್

 

8 ತಿಂಗಳ ಕಾಲ 10 ಜನ ನಾಟಕಕಾರರಿಗೆ ನಾಟಕ ಬರೆಯುವ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಅವರು ಏನನ್ನು ಬರೆಯಲು ಇಚ್ಛಿಸುತ್ತಾರೆ ಎಂಬುದನ್ನು ಅನ್ವೇಷಿಸಲು ಹಾಗೂ ಅದನ್ನು ಅವರ ಉದ್ದೇಶ ಮತ್ತು ಶಕ್ತಿಗೆ ಅನುಗುಣವಾಗಿ ಹೇಗೆ ಬರೆಯಬಹುದು ಎಂಬುದನ್ನು ಕಲಿಸಿಕೊಡಲಾಗುತ್ತದೆ.

 

ಈ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎರಡು 8 ದಿನಗಳ residencyಯನ್ನು  ಒಳಗೊಂಡಿರುತ್ತದೆ. ಈ residency, ಬರವಣಿಗೆ ಅಭ್ಯಾಸಗಳು, improvisationಗಳು, ನಾಟಕ ಓದುಗಳು, ಅತಿಥಿ ಉಪನ್ಯಾಸಗಳು, ನಾಟಕ ಹಾಗೂ ಚಿತ್ರ ಪ್ರದರ್ಶನಗಳು ಮತ್ತು ಒಳ್ಳೆಯ ಊಟ ಮತ್ತು ಚರ್ಚೆಗಳನ್ನು ಒಳಗೊಂಡಿರುತ್ತದೆ. 

 

ಪ್ರತಿ residencyಯ  ನಂತರ, ಲೇಖಕರು ಮಾರ್ಗದರ್ಶನದೊಂದಿಗೆ ಹಾಗೂ ನಿಗದಿತ ಪ್ರತಿಕ್ರಿಯೆಗಳೊಂದಿಗೆ ತಮ್ಮ ನಾಟಕಗಳನ್ನು ಬರೆಯತಕ್ಕದ್ದು.

 

ಈ ಪ್ರಕ್ರಿಯೆಯ ಕೊನೆಯಲ್ಲಿ ಮತ್ತು ಎರಡನೇ ಕರಡುಗಳ ನಂತರ, ಹತ್ತು ನಾಟಕಗಳಲ್ಲಿ ನಾಲ್ಕು ನಾಟಕಗಳನ್ನು ಆಯ್ಕೆ ಮಾಡಿ ಒಂದು ನಾಟಕೋತ್ಸವದಲ್ಲಿ  ಪ್ರಸ್ತುತಪಡಿಸಲಾಗುತ್ತದೆ.

 

ಹೀಗಾಗಿ ನೀವು ಯಾವುದೇ ಮಟ್ಟದ ಅನುಭವ ಹೊಂದಿರುವ ನಾಟಕಕಾರರಾಗಿದ್ದರೆ, ಮತ್ತು ನೀವು ಕನ್ನಡ ಮಾತನಾಡಿ, ಓದಿ, ಬರೆದು, ಅರ್ಥಮಾಡಿಕೊಳ್ಳಬಹುದಾದರೆ ಮತ್ತು ಈ ಫೆಲೋಶಿಪ್‌ನಲ್ಲಿ ಆಸಕ್ತರಾಗಿದ್ದರೆ, ದಯವಿಟ್ಟು ಈ ಫಾರ್ಮ್ ಅನ್ನು ಭರ್ತಿ ಮಾಡಿ.

 

ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: July 20, 2025

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು FAQ ವಿಭಾಗ ಓದಿ ಅಥವಾ vivek@bhashacentre.com ಗೆ ಇಮೇಲ್ ಮಾಡಿ. 

 

FAQs

 ಪಾತ್ರತೆಯ ಅಂಶಗಳು

  • ಅರ್ಜಿದಾರರು 2025ರ ಜನವರಿ 1ರ ವೇಳೆಗೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.

  • ಅರ್ಜಿದಾರರು ಕನ್ನಡದಲ್ಲಿ (ಯಾವುದೇ ಪ್ರಾಂತಭಾಷೆಯಾದರೂ ಸರಿ) ನಿಪುಣರಾಗಿರಬೇಕು.

  • ಅರ್ಜಿದಾರರು ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರೂ, ಬೆಂಗಳೂರಿನಲ್ಲಿ ನಡೆಯುವ residencyಯಲ್ಲಿ ಹಾಜರಾಗಿ ಭಾಗವಹಿಸಲು ಮತ್ತು ಯೋಜನೆಯ ಎಲ್ಲಾ ಕಾಲಮಿತಿಗಳಿಗೆ ಬದ್ಧರಾಗಿರಲು ತಯಾರಿರಬೇಕು.

  • ಮೊದಲ ಬಾರಿಗೆ ನಾಟಕ ಬರೆಯುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಾಟಕಕಾರರ ಅನುಭವ ಅವಶ್ಯವಿಲ್ಲ, ಆದರೆ ರಂಗಭೂಮಿಯಲ್ಲಿ ಅನುಭವವಿದ್ದರೆ, ಅದು ನಿಮ್ಮ ಅರ್ಜಿ ಪರಿಗಣನೆಗೆ ಸಹಾಯಕವಾಗುತ್ತದೆ.

ಕುಸುಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗುತ್ತದೆಯೆ?

ಕುಸುಮಾಲೆ ಒಂದು ಉಚಿತ ಕಾರ್ಯಕ್ರಮ. ಆಯ್ಕೆಯಾದ ಅಭ್ಯರ್ಥಿಗಳು ಹೊರೆವಹಿಸಬೇಕಾಗಿರುವ ಏಕೈಕ ವೆಚ್ಚವೆಂದರೆ, residency ಸ್ಥಳ, ಬೆಂಗಳೂರಿನ ‘ವಿಸ್ತಾರ್’ಗೆ ಬಂದು ಹೋಗುವ ಪ್ರಯಾಣದ ಖರ್ಚು ಮಾತ್ರ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು?

ಅರ್ಜಿದಾರರು ಅರ್ಜಿಪತ್ರವನ್ನು ಕೇವಲ ಕನ್ನಡದಲ್ಲೇ ಭರ್ತಿ ಮಾಡಬೇಕು.

 

ಅರ್ಜಿಯಲ್ಲಿ ನಿಮ್ಮ ಅನುಭವ, ನಿರೀಕ್ಷೆಗಳ ಕುರಿತಾಗಿ ಕೆಲವು ಪ್ರಶ್ನೆಗಳಿರುತ್ತವೆ. ಜೊತೆಗೆ, ನೀವು ಬರೆದ ನಾಟಕದ ಒಂದು ಉದಾಹರಣೆ (ಸಣ್ಣ ನಾಟಕ ಅಥವಾ ಕೆಲವು ದೃಶ್ಯಗಳಾದರೂ ಸರಿ) ಸಲ್ಲಿಸಬೇಕಾಗುತ್ತದೆ.

 

ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ July 20, 2025, ಸಂಜೆ 6 ಗಂಟೆ (ಭಾರತೀಯ ಪ್ರಮಾಣಿತ ಸಮಯ).

 

ಸುಮಾರು 15 ಅರ್ಜಿಗಳನ್ನು ಪ್ರಾಥಮಿಕವಾಗಿ ಆಯ್ದುಕೊಳ್ಳಲಾಗುತ್ತದೆ, ಮತ್ತು ಆಯ್ದ ಅರ್ಜಿದಾರರು ಕಾರ್ಯಕ್ರಮದ ಮಾರ್ಗದರ್ಶಕರೊಂದಿಗೆ ಒಂದು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದದ ಉದ್ದೇಶ ಸಂದೇಹಗಳ ನಿವಾರಣೆ ಹಾಗೂ ಸಂವಾದದ ಮೂಲಕ ಈ ಕಾರ್ಯಕ್ರಮವು ನಿಜಕ್ಕೂ ಆ ಅರ್ಜಿದಾರರಿಗೆ ಸಹಾಯವಾಗುತ್ತದೆಯೆ ಎಂದು ಖಚಿತಪಡಿಸಿಕೊಳ್ಳುವುದು.

 

ಈ ಸಂವಾದಗಳು ಆನ್ಲೈನ್‌ನಲ್ಲಿ ನಡೆಯುತ್ತವೆ ಮತ್ತು ಪರಸ್ಪರ ಅನುಕೂಲಕರ ಸಮಯಕ್ಕೆ ನಿಗದಿಪಡಿಸಲಾಗುತ್ತದೆ.

 

ಈ ಪ್ರಾಥಮಿಕ ಪಟ್ಟಿಯಿಂದ, 10 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆಮಾಡಲಾಗುತ್ತದೆ. 

ನೆನಪಿನಲ್ಲಿಡಬೇಕಾದ ಮುಖ್ಯ ದಿನಾಂಕಗಳು

ಜುಲೈ 20: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಸಂಜೆ 6 ಗಂಟೆ, IST)

ಜುಲೈ 25 ರಿಂದ ಜುಲೈ 28: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳೊಂದಿಗೆ ವೈಯಕ್ತಿಕ ಸಂಭಾಷಣೆ

ಆಗಸ್ಟ್ 1: ಆಯ್ಕೆಯಾದ 10 ಭಾಗವಹಿಸುವವರ ಘೋಷಣೆ

ಆಗಸ್ಟ್ 31 ಸಂಜೆ: ಎಲ್ಲರೂ ಬೆಂಗಳೂರಿನ ವಿಸ್ತಾರ್‌ಗೆ ಮೊದಲ Residency ಗೆ ಹಾಜರಾಗುವುದು

ಸೆಪ್ಟೆಂಬರ್ 1 ರಿಂದ 8: Residency 1

ಸೆಪ್ಟೆಂಬರ್ 9 ಬೆಳಗ್ಗೆ: ಎಲ್ಲರೂ ‘ವಿಸ್ತಾರ್‌’ ನಿಂದ ಹೊರಡುವುದು

ನವೆಂಬರ್ 10: ಮೊದಲ ಕರಡು ಸಲ್ಲಿಸಲು ಕೊನೆಯ ದಿನ

ಡಿಸೆಂಬರ್ 9 ಸಂಜೆ: ಎರಡನೇ Residency ಗೆ ಎಲ್ಲರೂ ‘ವಿಸ್ತಾರ್‌’ ನಲ್ಲಿ ಹಾಜರಾಗುವುದು

ಡಿಸೆಂಬರ್ 10 ರಿಂದ 17: Residency 2

ಡಿಸೆಂಬರ್ 18 ಬೆಳಗ್ಗೆ: ಎಲ್ಲರೂ ‘ವಿಸ್ತಾರ್‌’ ನಿಂದ ಹೊರಡುವುದು

ಜನವರಿ 20: ಎರಡನೇ ಕರಡು ಸಲ್ಲಿಸಲು ಕೊನೆಯ ದಿನ

ಜನವರಿ 31: ನಿರ್ಮಾಣಕ್ಕೆ ಆಯ್ಕೆಯಾದ ನಾಲ್ಕು ನಾಟಕಗಳ ಘೋಷಣೆ

ಫೆಬ್ರವರಿ 10: ನಾಟಕೋತ್ಸವದ ದಿನಾಂಕ ಮತ್ತು ಕಾರ್ಯಕ್ರಮಗಳ ಘೋಷಣೆ

ನಾಟಕೋತ್ಸವದ ವಿವರಗಳೇನು? ಈ ನಾಟಕಗಳನ್ನು ಯಾರು ನಿರ್ದೇಶಿಸುತ್ತಾರೆ?

ನಾಟಕೋತ್ಸವವು ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಆಯ್ಕೆಮಾಡಲಾದ 10 ನಾಟಕಗಳಲ್ಲಿ 4 ನಾಟಕಗಳನ್ನು ಸಂಪೂರ್ಣವಾಗಿ ನಿರ್ವಹಿಸಿ, ನಿರ್ಮಿಸಲಾಗುತ್ತದೆ. ಉಳಿದ 6 ನಾಟಕಗಳನ್ನು ಸರಳವಾಗಿ ಅಭ್ಯಾಸಗೊಂಡ ಓದುಗಳ ರೂಪದಲ್ಲಿ ವೇದಿಕೆಗೇರಿಸಲಾಗುತ್ತದೆ.

 

ಈ ಹಬ್ಬದಲ್ಲಿ ಉಪನ್ಯಾಸಗಳು, ಸಂವಾದಗಳು, ಕಾರ್ಯಾಗಾರಗಳು ಮುಂತಾದ ಇತರೆ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.

 

ನಿರ್ಮಿಸಲು ಆಯ್ಕೆಯಾಗುವ 4 ನಾಟಕಗಳನ್ನು, ನಿರ್ಮಲಿಚ್ಚಿಸುವ ನಿರ್ದೇಶಕರಿಗೂ, ತಂಡಗಳಿಗೂ ನೀಡಲಾಗುತ್ತದೆ. ಹೊಸ ನಾಟಕಗಳೊಂದಿಗೆ ಹಾಗೂ ಹೊಸ ನಾಟಕಕಾರರೊಂದಿಗೆ ಅರ್ಥಪೂರ್ಣವಾಗಿ ಕೆಲಸ ಮಾಡಲು ಅರ್ಹತೆ ಹೊಂದಿರುವವರು ಈ ನಾಟಕಗಳನ್ನು ನಿರ್ಮಿಸಲು, ನಿರ್ದೇಶಿಸಲು, ಆಯ್ಕೆಗೊಳ್ಳುತ್ತಾರೆ. ನಾಟಕಕ್ಕೆ ಯೋಗ್ಯತೆ ದೊರಕುವಂತಾಗಬೇಕು ಎಂಬುದು ನಮ್ಮ ಉದ್ದೇಶ. 

 

ಪ್ರತಿ ತಂಡಕ್ಕೆ ಈ ನಾಟಕವನ್ನು ನಿರ್ಮಿಸಲು ರೂ. 1 ಲಕ್ಷ ರೂ. ಬಿತ್ತನೆ ಧನ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಕನಿಷ್ಠ ಎರಡು ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಈ ಎರಡು ಪ್ರದರ್ಶನಗಳ ಎಲ್ಲ ಖರ್ಚುಗಳನ್ನು ಕಾರ್ಯಕ್ರಮವೇ ಹೊತ್ತುಕೊಳ್ಳುತ್ತದೆ ಮತ್ತು ಟಿಕೆಟ್ ಮಾರಾಟದ 50% ಮೊತ್ತವನ್ನು ತಂಡಕ್ಕೆ ನೀಡಲಾಗುತ್ತದೆ.

 

ತದನಂತರ, ಆ ನಾಟಕ ಆ ತಂಡದ ಸ್ವತಂತ್ರತ್ವಕ್ಕೆ ಬಿಟ್ಟದ್ದಾಗುತ್ತದೆ. 

 

ನಾಟಕೋತ್ಸವದ ಅಂತಿಮ ದಿನಾಂಕವನ್ನು 2025ರ ಕೊನೆ ವೇಳೆಗೆ ಘೋಷಿಸಲಾಗುತ್ತದೆ.

ನಾನು ಆಯ್ಕೆ ಆದರೆ, ಮತ್ತು ನನ್ನ ನಾಟಕ ನಾಟಕೋತ್ಸವದಲ್ಲಿ ನಿರ್ಮಿಸಲು ಆಯ್ಕೆಯಾದರೆ, ನಾನು ನನ್ನ ನಾಟಕವನ್ನು ನಿರ್ದೇಶಿಸಬಹುದೆ?

ಈ ಪ್ರಕ್ರಿಯೆಯಲ್ಲಿ ಲೇಖಕರು ತಮ್ಮದೇ ನಾಟಕವನ್ನು ನಿರ್ದೇಶಿಸಲು ಅಥವಾ ನಿರ್ಮಿಸಲು ಪ್ರೋತ್ಸಾಹಿಸಲಾಗುವುದಿಲ್ಲ.

 

ಒಂದು ನಾಟಕಕಾರನ ಪ್ರಮುಖ ಹೊಣೆಗಾರಿಕೆ ಎಂದರೆ, ನಿರ್ದೇಶಕರ ವಿಭಿನ್ನ ವಿವರಣೆಗಳ ನಡುವೆಯೂ ನಾಟಕ ತನ್ನ ಸಾಮರ್ಥ್ಯದಿಂದ ನಿಲ್ಲಬಲ್ಲಂತೆ ಬರೆಯುವುದು.

 

'ನಾನು ನಿರ್ದೇಶಿಸಬಹುದಾದ ಹಾಗೂ ನಂತರ ಸರಿಪಡಿಸಬಹುದಾದ' ಎಂಬ ನಾಟಕ ಪ್ರತಿಯು, ಶಕ್ತಿಯುತವಾದ ನಾಟಕವನ್ನು ಬರೆಯಲು ಕಲಿಯುವ ಪ್ರಕ್ರಿಯೆಗೆ ತೀವ್ರವಾಗಿ ಹಾನಿಕರವಾಗಿದೆ.

​ನಾಟಕದ copyright ಯಾರದ್ದಾಗಿರುತ್ತದೆ?

ನಾಟಕಕಾರರು ಸೃಜಿಸಿದ ಕೃತಿಗೆ ಸಂಬಂಧಿಸಿದ ಎಲ್ಲಾ ನೈತಿಕ ಮತ್ತು ಕಾನೂನು ಹಕ್ಕುಗಳು ನಾಟಕಕಾರರಲ್ಲಿಯೇ ಇರುತ್ತವೆ.

 

ಪೂರ್ಣಗೊಂಡ ನಾಟಕದ ಪ್ರತಿ TDL, ಅಂದರೆ ಭಾಷಾ ಸೆಂಟರ್‌ನ ಆನ್‌ಲೈನ್ ಗ್ರಂಥಾಲಯದಲ್ಲಿ, ರಂಗೋತ್ಸವದಲ್ಲಿ ಪ್ರದರ್ಶನವಾದ ದಿನದಿಂದ ಕನಿಷ್ಠ ಒಂದು ವರ್ಷದ ವರೆಗೆ ಉಳಿಯಲಿದೆ.

FACILITATOR ಗಳ ವಿವರ 

Irawati Karnik (1).jpeg

ಇರಾವತಿ ಕಾರ್ನಿಕ್

ಇರಾವತಿ ಕಾರ್ನಿಕ್ ಮುಂಬೈನಲ್ಲಿರುವ ಲೇಖಕಿ, ನಾಟಕಕಾರ್ತಿ, ಚಿತ್ರಕಥೆಗಾರ್ತಿ, ಅನುವಾದಕಿ, ನಾಟಕ ಸಂಶೋಧಕಿ ಮತ್ತು ನಟಿಯೂ ಆಗಿದ್ದಾರೆ. ಅವರು ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಾರೆ.

 

ವಿಜಯ್ ತೆಂಡೂಲ್ಕರ್ ಅವರು ಸ್ಥಾಪಿಸಿದ, ಚೆತನ್ ದಾತಾರ್ ಮುನ್ನಡೆಸುತ್ತಿದ್ದ ತಂಡ ಅವಿಷ್ಕಾರ್ ನಲ್ಲಿ ಕೆಲಸ ಮಾಡುವ ಮೂಲಕ, ಇರಾವತಿಯ ನಾಟಕಯಾತ್ರೆ 2003ರಲ್ಲಿ ಆರಂಭವಾಯಿತು. 

 

ನಂತರದ ದಿನಗಳಲ್ಲಿ ಇರಾವತಿ ಹಲವಾರು ಪ್ರಮುಖ ನಾಟಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡ ನಾಟಕಗಳನ್ನು ರಚಿಸಿದ್ದಾರೆ.

 

ಅವರು ಅನುವಾದಿಸಿದ ಅನೇಕ ಬರಹಗಳು Oxford University Press ಮೂಲಕ ಪ್ರಕಟವಾಗಿದೆ.

 

ಇರಾವತಿ ಲೇಖನ ಮತ್ತು ಚಿತ್ರಕಥೆ ಕ್ಷೇತ್ರದಲ್ಲಿಯೂ ಉನ್ನತ ಮಟ್ಟದಲ್ಲಿ ಕೆಲಸಮಾಡಿದ್ದು, ಅವರು ಬರೆದ ಹಲವಾರು ಚಲನಚಿತ್ರಗಳು ಪ್ರಶಸ್ತಿ ಗಳಿಸಿವೆ.

 

Sir JJ School of Fine Arts  ಶಾಲೆಯ ವಿದ್ಯಾರ್ಥಿನಿಯಾಗಿದ್ದ ಇರಾವತಿ, ಭಾರತದ ಸಮಕಾಲೀನ ಕಲೆಗಳ ಸಂಶೋಧನೆ ಮತ್ತು ದಾಖಲಾತಿಯನ್ನೂ ಮಾಡಿರುತ್ತಾರೆ. ಅವರ ಲೇಖನ ಹಾಗೂ ಅನುವಾದಗಳು ಬೋಧನಾ ಆರ್ಟ್ಸ್ & ರಿಸರ್ಚ್ ಫೌಂಡೇಶನ್ ಪ್ರಕಟಿಸಿದ ಪುಸ್ತಕಗಳಲ್ಲಿ ಲಭ್ಯವಿದೆ.

 

ಈಗ ಇರವತಿ ಕಾರ್ನಿಕ್ Drama School Mumbai (DSM) ನ ಅಕಾಡೆಮಿಕ್ ಮುಖ್ಯಸ್ಥೆಯಾಗಿದ್ದಾರೆ.

 

1000167308.jpg

ಸಾತ್ವಿಕ್.ಎನ್.ಎನ್

ಸಾತ್ವಿಕ್.ಎನ್.ಎನ್, ಕಲಾ, ಮಾಧ್ಯಮ, ನಾಟಕ ಕ್ಷೇತ್ರದಲ್ಲಿ ಹಾಗೂ ಲೇಖಕರಾಗಿ ಹತ್ತ್ಕಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಕೆಲಸವು ನಾಟಕ, ನಾಗರಿಕ ಸಮಾಜ ಮತ್ತು ಶಿಕ್ಷಣ ಕ್ಷೆತ್ರದ ನಡುವಿನ ಅಂತರಕ್ಷೇತ್ರದಲ್ಲಿ ನಡೆಯುತ್ತದೆ.

 

ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಾಟಕಗಳ ಬರವಣಿಗೆ, ಅನುವಾದ, ನಿರ್ಮಾಣ ಹಾಗು ನಿರ್ದೇಶನದಲ್ಲಿ ಅನುಭವ ಹೊಂದಿದ್ದಾರೆ. 

 

Indian Ensemble ಮತ್ತು ರಂಗಶಂಕರದಲ್ಲಿ ಕೆಲಸ ಮತ್ತು ಕಲಿಕೆಯನ್ನು ಪ್ರಾರಂಭಿಸಿದ ಇವರು, 2018 ರಲ್ಲಿ Inlaks Scholarship ಪಡೆದು Goldsmiths, University of London ನಿಂದ MA in Writing for Performance and Dramaturgy ಪದವಿ ಗಳಿಸಿದ್ದಾರೆ.

Lakshmana KP.jpg

ಲಕ್ಷ್ಮಣ ಕೆ.ಪಿ.

ಲಕ್ಷ್ಮಣ ಕೆ.ಪಿ. ಜಂಗಮ ಕಲೆಕ್ಟಿವ್ ನ ಸ್ಥಾಪಕರಲ್ಲಿ ಒಬ್ಬರಾಗಿದ್ದು, ನಟ, ನಿರ್ದೇಶಕ, ಕವಿ ಮತ್ತು ಪ್ರದರ್ಶನ ಶಿಕ್ಷಕರಾಗಿದ್ದಾರೆ. ಅವರು 2018ರಲ್ಲಿ ಸಿಂಗಪುರದ Intercultural Theatre Institute ನಿಂದ  ಹಾಗೂ 2012ರಲ್ಲಿ ನೀನಾಸಂ ಥಿಯೇಟರ್ ಇನ್‌ಸ್ಟಿಟ್ಯೂಟ್ನಿಂದ ಪದವಿ ಪಡೆದಿದ್ದಾರೆ.

 

ಲಕ್ಷ್ಮಣ್ ಅವರ ಪ್ರದರ್ಶನಗಳು Dalit aesthetics ನ  ಅನ್ವೇಷಣೆಯತ್ತ ಕೇಂದ್ರಿತವಾಗಿವೆ. ಅವರ ಇತ್ತೀಚಿನ ನಾಟಕಗಳು – We the People of India, ದಕ್ಲಕಥಾ ದೇವಿ ಕಾವ್ಯ, ಮತ್ತು ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ – ದಲಿತ ರಾಜಕೀಯ ಆಧುನಿಕತೆ, ಸಾಂಸ್ಕೃತಿಕ ಸ್ಮರಣೆ, ಮತ್ತು ಸಾಮಾಜಿಕ ಅಸ್ತಿತ್ವದ ಕುರಿತು ಆಳವಾದ ಚಿಂತನೆ ನಡೆಸುತ್ತವೆ.

 

ಅವರ ನಾಟಕಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯ ಕಥಾವಸ್ತುಗಳು ಬಿಂಬಿತವಾಗಿರುವುದು ಸಾಮಾನ್ಯ.

 

ಸಮಕಾಲೀನ ನಾಟಕ ಕ್ಷೇತ್ರಕ್ಕೆ ಕೊಡುಗೆ ನೀಡಿದಕ್ಕಾಗಿ, ಅವರು 2023ರಲ್ಲಿ ಪ್ರತಿಷ್ಠಿತ ಶಂಕರ್ ನಾಗ್ ಥೀಯೇಟರ್ ಪ್ರಶಸ್ತಿ ಹಾಗೂ 2024ರಲ್ಲಿ ಡೆಕ್ಕನ್ ಹೆರಾಲ್ಡ್ ಚೇಂಜ್‌ಮೇಕರ್ ಪ್ರಶಸ್ತಿ ಗಳಿಸಿದ್ದಾರೆ.

 

ಲಕ್ಷ್ಮಣ್ ಪ್ರಕಟಿತ ಕವಿ ಆಗಿರುವುದರ ಜೊತೆಗೆ, ಭಾರತೀಯ ಸಮಾಜದ ಹಿಮ್ಸಿತ ಜನಾಂಗಗಳು ಮತ್ತು ಸಂಸ್ಕೃತಿಗಳ ಪರವಾಗಿ ಹೋರಾಡುವ ಹಕ್ಕು ಹೋರಾಟಗಾರರಾಗಿಯೂ ಗುರುತಿಸಲ್ಪಟ್ಟಿದ್ದಾರೆ.

Yeshaswini.jpg

ಯಶಸ್ವಿನಿ

ಯಶಸ್ವಿನಿ - ನಟಿ, ನಿರ್ದೇಶಕಿ ಹಾಗು ರಂಗಶಿಕ್ಷಕಿ. 2012 ರಲ್ಲಿ ನಟನೆ ಶುರು ಮಾಡಿ, 25ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ಭಾರತದ ಹಲವು ರಂಗ ತಂಡಗಳೊಡನೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. USA ಮತ್ತು UK ಯ ನಿರ್ದೇಶಕರೊಡನೆ ನಟಿಯಾಗಿ ಕೆಲಸ ಮಾಡಿರುವ ಅನುಭವವಿದೆ. 2014ರ ನಂತರ ತಮ್ಮ ಅಭ್ಯಾಸವನ್ನು ವಿಸ್ತಾರಗೊಳಿಸಿಕೊಂಡು, ಮಕ್ಕಳಿಗೆ ರಂಗ ತರಬೇತಿ ನೀಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಕ್ಕಳಿಗೆ ಸ್ವ-ಕೃತಿಗಳನ್ನು ಹಾಗು ಕ್ಲಾಸಿಕ್ ಗಳನ್ನು ಅಳವಡಿಸಿಕೊಂಡು ನಾಟಕಗಳನ್ನು ರಚಿಸಿ ಆಡಿಸಿದ್ದಾರೆ ಹಾಗು ಕತೆ ಹೇಳುವ ವಿಧಾನಗಳನ್ನು ಬಳಸಿಕೊಂಡು ಹಲವು ರಂಗ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ. ರಂಗ ತರಬೇತಿಯು ಮಕ್ಕಳ ಅಭಿವ್ಯಕ್ತಿ ಹಾಗು ಸಬಲೀಕರಣದ ಸಾಧನವಾಗಬಹುದು ಎನ್ನುವ ನಿಟ್ಟಿನಲ್ಲಿ, ಜಾಗೃತಿ ಥಿಯೇಟರ್, ಬ್ರಿಟಿಷ್ ಲೈಬ್ರರಿ, ಮಕ್ಕಳ ಜಾಗೃತಿ (NGO) ಹಾಗು ಇನ್ನಿತರ ಸಂಸ್ಥೆಗಳ ಜೊತೆ ರಂಗಶಿಕ್ಷಕರಾಗಿ ಕೈಜೋಡಿಸಿದ್ದಾರೆ. ಇತ್ತೀಚೆಗೆ, ರಂಗಶಂಕರದ 2024 ರ ವಾರ್ಷಿಕ ರಂಗೋತ್ಸವದ ಅಂಗವಾಗಿ, ಅರ್ಸಲ. ಕೆ. ಲೆಗ್ವಿನ್ ರವರ Introducing Myself ಪ್ರಬಂಧವನ್ನು ಆಧರಿಸಿ, ನಾಟಕವನ್ನು ನಿರ್ದೇಶಿಸಿದ್ದಾರೆ.

© 2023 by Bhasha Centre

  • Instagram
  • Facebook - Black Circle
bottom of page